Live Sunday, October 25, 2026
Font Size:
ಸುದ್ದಿ 1 min read 16 Views
Sep 24, 2026

ಪೌತಿ ಖಾತೆಗಾಗಿ ₹30 ಸಾವಿರ ಲಂಚ: ಆರ್‌ಐ ನಾಗೇಶ್ ಲೋಕಾಯುಕ್ತ ಬಲೆಗೆ

ಪೌತಿ ಖಾತೆಗಾಗಿ ₹30 ಸಾವಿರ ಲಂಚ: ಆರ್‌ಐ ನಾಗೇಶ್ ಲೋಕಾಯುಕ್ತ ಬಲೆಗೆ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಮಧುಗಿರಿ, ಸೆ.24: ಪೌತಿ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ (ಆರ್‌ಐ) ನಾಗೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ರೇಣುಕೇಶ್ ಅವರು ತಮ್ಮ ತಾತನ ಹೆಸರಿನ ಜಮೀನಿನ ಪೌತಿ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್‌ಪಿ ಮಲ್ಲೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸೆ.24ರಂದು ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ₹30 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ನಾಗೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪಿಐಗಳಾದ ರಾಜು, ನಿರ್ಮಲಾದೇವಿ, ಶಾಂತಿನಾಥ್ ಹೊನ್ನೂರು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. 

“ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ರೈತರಿಂದ ಲಂಚ ಪಡೆಯುವುದು ಖಂಡನೀಯ. ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಲಂಚವಿಲ್ಲದೆ ನಡೆಯುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು,” - ರಫೀಕ್ ಪಾಷ , ಸಾಮಾಜಿಕ ಹೋರಾಟಗಾರರು,  ಬೆಳದರ.  

ಪೌತಿ ಖಾತೆ ಸೇರಿದಂತೆ ರೈತರ ಭೂ ದಾಖಲೆಗಳ ಕೆಲಸಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಲಂಚದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” - ಮಹೇಶ್ ಮಧುಗಿರಿ, ಸಾಮಾಜಿಕ ಹೋರಾಟಗಾರರು,

ಆರ್‌ಐ, ವಿ‌ಎ ಹಾಗೂ ಇತರ ಅಧಿಕಾರಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅಗತ್ಯವಿದ್ದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,” - ಟೈಗರ್ ನಾಗ್ (ಜೆಟ್ಟಿ ಅಗ್ರಹಾರ ನಾಗರಾಜು) ಸಾಮಾಜಿಕ ಹೋರಾಟಗಾರರು,